-
ದೀನತೆಯು ಒಂದು ಪ್ರಾಮುಖ್ಯವಾದ ಆತ್ಮೀಕ ಗುಣವಾಗಿದೆ. ಈ ಅಸ್ಪಷ್ಟ ಮೋಡದಂತೆÉ ಮೊಬ್ಬಾಗಿರುವ ಆದರೆ ಪ್ರಮುಖ್ಯವಾದ ಆತ್ಮೀಕ ಗುಣದ ಕುರಿತು ಬರೆಯುವ ಧೈರ್ಯವನ್ನು ಮಾಡಿದವರು ಕೆಲವೇ ಕೆಲವರಿದ್ದಾರೆ. ಈ ರೋಮಾಂಚನಕಾರಿ ಸಂಪುಟದಲ್ಲಿ, ಡ್ಯಾಗ್ ಹೇವರ್ಡ್-ಮಿಲ್ಸ್ನು ಗರ್ವದ ಅನೇಕ ಕುಟಿಲವಾದ ರೂಪಗಳನ್ನು ಬಯಲಿಗೆ ತರುತ್ತಾನೆ. ಈ ಶಕ್ತಿಶಾಲಿ ಪುಸ್ತಕವು ಹೋರಾಟದಲ್ಲಿರುವ ಜೊತೆಯ ಕ್ರೈಸ್ತನಿಂದ ಬರೆಯಲ್ಪಟ್ಟಿದ್ದು, ನಿಮಗೆ ಆಶೀರ್ವಾದ ತರುವದು ಹಾಗೂ ಯೇಸು ಕ್ರಿಸ್ತನ ಮಗುವಿನಂಥ ದೀನತೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ನಿಮಗೆ ಪೋತ್ಸಾಹವನ್ನು ನೀಡುವದು.
-
ಯೇಸು ಕ್ರಿಸ್ತನನ್ನು ನಿಮ್ಮ ಕರ್ತನು ಮತ್ತು ರಕ್ಷಕನನ್ನಾಗಿ ಸ್ವೀಕರಿಸಿದ ನಂತರ ನೀವು ರಕ್ಷಣೆ ಹೊಂದಿದ್ದೀರಿ! ನೀವು ಹೊಸದಾಗಿ ಹುಟ್ಟಿದ ಕ್ರೈಸ್ತರುಮತ್ತು ನಿಮ್ಮ ಹೆಸರು ಜೀವ ಭಾದ್ಯರ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ. ನಿಮ್ಮ ಪ್ರಶ್ನೆ: “ಮುಂದೆ ತೆಗೆದುಕೊಳ್ಳಬೇಕಾದ ಹೆಜ್ಜೆ ಯಾವುದು?” ಕ್ರೈಸ್ತರಾಗಿರುವದು ಉತ್ತಮವಾದ ಹೆಜ್ಜೆ, ಆದರೆ ಅದು ಪ್ರಾರಂಭ ಮಾತ್ರ. ನೀವು ಉತ್ತಮವಾದ, ಬಲವಾದ ಕ್ರೈಸ್ತರಾಗಬೇಕಾಗಿದೆ. ’ಹಾಗಿದ್ದಲ್ಲಿಅದನ್ನು ನಾನು ಹೇಗೆ ಮಾಡಬೇಕು?’ – ಮತ್ತು ಮರಣಕ್ಕೆ ಅಥವಾ ಎತ್ತಲ್ಪಡುವದಕ್ಕೆ ಸಿದ್ದರಾಗಿರುವ ಬಲವಾದ ಕ್ರೈಸ್ತರಾಗಲು ತೆಗೆದುಕೊಳ್ಳಬೇಕಾದ ಹಜ್ಜೆಗಳನ್ನು ಈ ಪುಸ್ತಕದಲ್ಲಿ, ನೀವು ಕಲಿಯುತ್ತೀರಿ
-
ನಿಜವಾಗಿಯೂ ದೇವರು ಅನೇಕ ಜನರನ್ನು ಕರೆದಿದ್ದಾನೆ. ಭೂಮಿಯ ಮೇಲಿನ ನಮ್ಮ ಜೀವೀತವು ಆತನಿಗೆ ಸೇವೆ ಸಲ್ಲಿಸಲು ಒಂದು ಅವಕಾಶವಾಗಿದೆ, ಮತ್ತು ನೀವು ದೇವರ ರಾಜ್ಯಕ್ಕಾಗಿ ಮಾಡುತ್ತಿರುವ ಕೆಲಸಗಳ ಮೇಲೆ ಆತನ ಕಣ್ಣು ಹೊಂದಿರುವನು. ಈ ಪುಸ್ತಕವು ಉತ್ಸಾಹದಿಂದ ಓದುವಂತೆ ಮಾಡುತ್ತದೆ. ಲೇಖಕನು ಹೇಳಿದ ಸತ್ಯಗಳನ್ನು ನೀವು ಅಂತರ್ಗತ ಮಾಡಿಕೊಂಡರೆ, ನಿಮ್ಮ ಜೀವನದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲು ಬುದ್ದಿವಂತಿಕೆಯನ್ನು ಹೋಂದುವಿರಿ.
-
“ಸತ್ಯವೇದದಲ್ಲಿನ ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರದ ಕಥೆಯು ನಮಗೆ ಹೇಗೆ ಸಂಬಂಧಿಸಿದೆ ಎಂದು ನಮ್ಮಲ್ಲಿ ಹಲವರಿಗೆ ಅರ್ಥವಾಗುತ್ತಿಲ್ಲ. ಇದುದುರದೃಷ್ಟಕರ ಘಟನೆ ಮತ್ತು ಆದಾಮ ಮತ್ತು ಹವ್ವಳ ಮೇಲೆ ಪರಿಣಾಮ ಬೀರಿತು ಮತ್ತು ಅದರಿಂದ ನಾವು ತಪ್ಪಿಸಿಕೊಂಡಿದ್ದೇವೆ ಎಂದು ನಾವು ಭಾವಿಸುತ್ತೇವೆ. ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರದಿಂದ ನೀವು ನಿಜವಾಗಿಯೂ ತಪ್ಪಿಸಿಕೊಂಡಿದ್ದೀರಾ? ಈ ನೇರ ಪುಸ್ತಕದಲ್ಲಿ, ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರವು ಇಂದಿಗೂ ಅಸ್ತಿತ್ವದಲ್ಲಿದೆ ಎಂದು ನೀವು ತಿಳಿಯುವಿರಿ. ಆದಾಮ ಮತ್ತು ಹವ್ವಳಿಗೆಮಾಡಿದಂತೆಯೇ ಅದೇ ಶೋಧನೆಯನ್ನು ಅದು ನಮಗೆ ನೀಡುತ್ತದೆ ಎಂದು ನೀವು ಕಂಡುಕೊಳ್ಳುವಿರಿ. ಈ ಪುಸ್ತಕದಲ್ಲಿ ನೀವು ಸಂಪಾದಿಸಿದ ಜ್ಞಾನವನ್ನುಬಳಸಿಕೊಂಡು ಜೀವನ ಮತ್ತು ಸೇವೆಯ ಮೂಲಕ ಮುಂದೆ ಹೊಗಲು ಸಹಾಯ ಮಾಡುವ ಸತ್ಯಗಳನ್ನು ಸಹ ನೀವು ಕಂಡುಕೊಳ್ಳುವಿರಿ.”