-
ಹೊಸ ಕ್ರೈಸ್ತರು ತಮ್ಮ ರಕ್ಷಣೆಯ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರ ಹೊಸ ಜೀವನವನ್ನುನಿಯಂತ್ರಿಸುವ ತತ್ವಗಳನ್ನು ಕಲಿಯುವುದು ಬಹಳ ಮುಖ್ಯವಾಗಿದೆ. ಹೊಸ ವಿಶ್ವಾಸಿಗಳಿಗೆ ಪ್ರಮುಖ ಸಂಗತಿಗಳನ್ನು ಈಅಗತ್ಯವನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಹೊಸ ಕ್ರೈಸ್ತರು ತಮ್ಮ ಹೊಸ ನಂಬಿಕೆಯಲ್ಲಿ ವಿಜಯಶಾಲಿಯಾಗಿನಡೆಯಲು ಒಂದು ಅಡಿಪಾಯವನ್ನು ಒದಗಿಸಲಾಗಿದೆ.
-
“ಈ ಪುಸ್ತಕದ ಶೀರ್ಷಿಕೆ ತಕ್ಷಣವೇ ಸಣ್ಣ ಮಕ್ಕಳು ಸಂತೋಷದಿಂದ ಹಾಡುವ ಬಗ್ಗೆ ಯೋಚಿಸುವಂತೆ ಮಾಡುತ್ತದೆ...ನೀವು ಪ್ರತಿದಿನ ನಿಮ್ಮ ಸತ್ಯವೇದವನ್ನು ಓದುತ್ತೀರಾ? ನೀವು ಪ್ರತಿದಿನ ಪ್ರಾರ್ಥಿಸುತ್ತೀರಾ? ಈ ಪುಸ್ತಕವು ಸತ್ಯವೇದ ಎಂದು ಕರೆಯಲ್ಪಡುವ ಈ ಅದ್ಭುತವಾದ ಒಂದು ಪುಸ್ತಕಕ್ಕೆ ನಿಮ್ಮ ಕಣ್ಣುಗಳನ್ನು ತೆರೆಯುಂತೆ ಮಾಡುತ್ತದೆ. ನೀವು ಸತ್ಯವೇದವನ್ನು ಓದುವಾಗ ಮತ್ತುಪ್ರತಿದಿನ ಪ್ರಾರ್ಥಿಸುವಾಗ ಪ್ರತಿದಿನ ನಿಮಗೆ ಬರುವ ಅದ್ಬುತಗಳನ್ನು ಇದು ನಿಮಗೆ ತೊರಿಸುತ್ತದೆ. ನಿಮ್ಮ ದೈನಂದಿನ ಸತ್ಯವೇದ ಓದುವಿಕೆ ಮತ್ತು ದೈನಂದಿನ ಪ್ರಾರ್ಥನೆನಿಮಗೆ ಆನಂದವುಂಟುಮಾಡಲಿ!”
-
“ನೀವು ಜೀವನದ ಮೂಲಕ ಪ್ರಯಾಣಿಸುವಾಗ ಅದೃಶ್ಯ ಜಗತ್ತು ನೈಜ ಜಗತ್ತು ಮತ್ತು ಈ ಭೌತಿಕ ಪ್ರಪಂಚವು ಅದೃಶ್ಯ ಜಗತ್ತಿನಲ್ಲಿ ಕೆಲವು ವಿಷಯಗಳನ್ನು ಮಾತ್ರಪ್ರಕಟಿಸುತ್ತದೆ. ನಿಮಗೆ ಗೋಚರಿಸುವ ಶತ್ರುಗಳಿರುವಂತೆಯೇ, ನಿಮಗೂ ಅದೃಶ್ಯ ಶತ್ರುಗಳು ಸಹ ಇರುತ್ತಾರೆ. ನಿಮ್ಮ ಶತ್ರು, ಅವನ ತಂತ್ರಗಳು, ಅವನ ಶೈಲಿ ಮತ್ತುಶಸ್ತ್ರಾಸ್ತ್ರಗಳನ್ನು ತಿಳಿಯದೆ ನೀವು ಅವನೊಂದಿಗೆ ಹೋರಾಡಬಹುದೇ? ಈ ಪುಸ್ತಕವು ನಿಮ್ಮ ಜೀವನದ ಪ್ರಯಾಣಕ್ಕೆ ಅತ್ಯಗತ್ಯವಾದ ಸಾಧನವಾಗಿದೆ. ಈ ಪುಸ್ತಕದಲ್ಲಿ ನಿಮ್ಮ ಅದೃಶ್ಯದ ಶತ್ರುಗಳು ಯಾರು, ಅವರ ಅಸ್ತಿತ್ವದ ಮೂಲ, ಅವರಗುಣಲಕ್ಷಣಗಳು ಮತ್ತು ಅವರ ವಿರುದ್ಧದ ಹೋರಾಟವನ್ನು ಹೇಗೆ ಗೆಲ್ಲುವುದು ಎಂದು ನೀವು ಕಲಿಯುವಿರಿ. ನಿಮ್ಮ ಅದೃಶ್ಯ ಶತ್ರುಗಳನ್ನು ಜಯಿಸಲು ಈ ಅಮೂಲ್ಯ ಪುಸ್ತಕವು ನಿಮಗೆ ಸಹಾಯ ಮಾಡಲಿ!”