-
ಅತ್ಯುತ್ತಮ ಕೆಲಸದಲ್ಲಿ, ಡಗ್ ಹೇವರ್ಡ್-ಮಿಲ್ಸ್ ರವರು ಇಂದಿನ ಸೇವಯಲ್ಲಿರುವ ನಿಜ-ಜೀವನದ ಪರಿಸ್ಥಿತಿಗಳನ್ನು ಪರಿಶೀಲಿಸುತ್ತಿದ್ದಾರೆ. ಅವರು ಹಣಕಾಸು, ರಾಜಕೀಯ, ಬಿನ್ನ ಲಿಂಗದವರೊಂದಿಗೆ ಸಂಬಂಧಕಲ್ಪಿಸುವ ಬಗ್ಗೆ, ಮತ್ತು ಸೇವಾ ಪರಸ್ಪರ ಕ್ರಿಯೆ, ಇಂಥ ಪ್ರಾಯೋಗಿಕ ಸಮಸ್ಯೆಗಳನ್ನು ಕುರಿತಾಗಿ ಹೇಳುತ್ತಾರೆ. ನಿಮ್ಮ ಕರೆಯನ್ನು ಮೂಲಭೂತವಾಗಿ ಅಭ್ಯಾಸಿಸಲು ಸಾಮಾನ್ಯ ತಿಳುವಳಿಕೆಯ ಮಾರ್ಗದರ್ಶಿಯಾಗಿರುವ ಈ ಪುಸ್ತಕವು ಪ್ರತಿಯೊಬ್ಬ ಕ್ರೈಸ್ತ ನಾಯಕನಿಗೆ ಅತ್ಯಗತ್ಯವಾಗಿದೆ. ಇದನ್ನು ಸಾಮಾನ್ಯವಾಗಿ ಸತ್ಯವೇದ ಶಾಲೆಗಳಿಗೆ ಮತ್ತು ಕ್ರೈಸ್ತಪಾದ್ರಿಗಳಿಗೆ ಹೆಚ್ಚಾಗಿ ಶಿಫಾರಸುಮಾಡಲಾಗಿದೆ.ಲೇಖಕರ ಪರಿಚಯ
-
“ಕರ್ತನನ್ನು ಸೇವಿಸುವುದು ದೊಡ್ಡ ವಿಷಯ ಎಂದು ನೀವು ಕೇಳಿರಬಹುದು; ಆದರೆ ನಮ್ಮ ದೇವರಾದ ಕರ್ತನನ್ನು ಸೇವಿಸುವುದು ಎಷ್ಟು ದೊಡ್ಡದು ಎಂದುನೀವು ಸ್ಪಷ್ಟವಾಗಿ ಯೋಚಿಸಿರಲಾರಿರಿ. ಡ್ಯಾಗ್ ಹೆವಾರ್ಡ್-ಮಿಲ್ಸ್ ಅವರ ಈ ವಿಶೇಷ ಪುಸ್ತಕದಲ್ಲಿ ದೇವರ ಒಬ್ಬ ಸೇವಕನು ಯಾರು ಮತ್ತು ನೀವುಕರ್ತನನ್ನು ಹೇಗೆ ಸೇವಿಸಬಹುದು ಎಂದು ನೀವು ಅರ್ಥಮಾಡಿಕೊಳ್ಳುವಿರಿ. ಕರ್ತನನ್ನು ಸೇವಿಸುವವರು ಮತ್ತು ಆತನನ್ನು ಸೇವಿಸದವರ ನಡುವಿನ ವ್ಯತ್ಯಾಸವನ್ನು ನೀವು ಪ್ರಾಯೋಗಿಕವಾಗಿ ತಿಳಿದುಕೊಳ್ಳುವಿರಿ! ಕರ್ತನನ್ನು ಸೇವಿಸುವವರೊಂದಿಗೆ ನಿಮ್ಮನ್ನು ಕೂಡ ಎಣಿಸುವಂತಾಗಲಿ!”
-
“ಸತ್ಯವೇದದಲ್ಲಿನ ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರದ ಕಥೆಯು ನಮಗೆ ಹೇಗೆ ಸಂಬಂಧಿಸಿದೆ ಎಂದು ನಮ್ಮಲ್ಲಿ ಹಲವರಿಗೆ ಅರ್ಥವಾಗುತ್ತಿಲ್ಲ. ಇದುದುರದೃಷ್ಟಕರ ಘಟನೆ ಮತ್ತು ಆದಾಮ ಮತ್ತು ಹವ್ವಳ ಮೇಲೆ ಪರಿಣಾಮ ಬೀರಿತು ಮತ್ತು ಅದರಿಂದ ನಾವು ತಪ್ಪಿಸಿಕೊಂಡಿದ್ದೇವೆ ಎಂದು ನಾವು ಭಾವಿಸುತ್ತೇವೆ. ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರದಿಂದ ನೀವು ನಿಜವಾಗಿಯೂ ತಪ್ಪಿಸಿಕೊಂಡಿದ್ದೀರಾ? ಈ ನೇರ ಪುಸ್ತಕದಲ್ಲಿ, ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರವು ಇಂದಿಗೂ ಅಸ್ತಿತ್ವದಲ್ಲಿದೆ ಎಂದು ನೀವು ತಿಳಿಯುವಿರಿ. ಆದಾಮ ಮತ್ತು ಹವ್ವಳಿಗೆಮಾಡಿದಂತೆಯೇ ಅದೇ ಶೋಧನೆಯನ್ನು ಅದು ನಮಗೆ ನೀಡುತ್ತದೆ ಎಂದು ನೀವು ಕಂಡುಕೊಳ್ಳುವಿರಿ. ಈ ಪುಸ್ತಕದಲ್ಲಿ ನೀವು ಸಂಪಾದಿಸಿದ ಜ್ಞಾನವನ್ನುಬಳಸಿಕೊಂಡು ಜೀವನ ಮತ್ತು ಸೇವೆಯ ಮೂಲಕ ಮುಂದೆ ಹೊಗಲು ಸಹಾಯ ಮಾಡುವ ಸತ್ಯಗಳನ್ನು ಸಹ ನೀವು ಕಂಡುಕೊಳ್ಳುವಿರಿ.”
-
"ಯಶಸ್ವಿಯಾದ ಮತ್ತು ಫಲಭರಿತವಾದ ಸೇವೆಗೆ ಬಾಗಿಲನ್ನು ತೆರೆಯುವುದಕ್ಕೆ ಅಭಿಷೇಕ ಎನ್ನುವ ನಿಯಮ ಕೈಬೀಗವು ಬೇಕಾಗಿರುತ್ತದೆ. ಅನೇಕಮಂದಿ ಒಳ್ಳೆಯ ಉದ್ದೇಶಗಳೊಂದಿಗೆ ದೇವರ ಕೆಲಸವನ್ನು ಮಾಡಬೇಕೆಂದು ಪ್ರಯತ್ನಪಡುವರು, ಅವರು ತುಂಬಾ ದೂರವಿದ್ದಾರೆಂದು ತಿಳಿದುಕೊಳ್ಳುತ್ತಿಲ್ಲ ಯಾಕಂದರೆ “ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ ಆತ್ಮದಿಂದಲೇ (ಅಭಿಷೇಕದಿಂದಲೇ)” [ಜೆಕರ್ಯ.4:6] ಸೇವೆಯು ನಡೆಯುತ್ತದೆಯೆಂದು ತಿಳಿದುಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಬಿಷಪ್ ಡಗ್ ಹೆವಾರ್ಡ್-ಮಿಲ್ಸ್ ರವರು ಬರೆದಿರುವ “ಅಭಿಷೇಕವನ್ನು ಪಡೆದುಕೊಳ್ಳಿರಿ” ಎನ್ನುವ ಅಸಾಧಾರಣವಾದ ಈ ಪುಸ್ತಕವು ಅಭಿಷೇಕವನ್ನು ಪಡೆದುಕೊಳ್ಳುವುದು ಎಂದರೇನು ಎನ್ನುವದನ್ನು ನಿಮಗೆ ಬೋಧಿಸುತ್ತದೆ ಮತ್ತು ನೀವು ಇದನ್ನು ಪ್ರಾಯೋಗಿಕವಾಗಿ ಹೇಗೆ ಪಡೆದುಕೊಳ್ಳಬೇಕೆನ್ನುವುದನ್ನು ಕೂಡ ಬೋಧಿಸುತ್ತದೆ! ಈ ಪುಸ್ತಕ ಪುಟಗಳಿಂದ ನಿಮ್ಮಲ್ಲಿ ದೇವರ ಅಭಿಷೇಕವು ಸುರಿಸಲ್ಪಡುವದಕ್ಕೆ ತವಕವನ್ನು ಹೊಂದಿರಿ!"