-
ದೀನತೆಯು ಒಂದು ಪ್ರಾಮುಖ್ಯವಾದ ಆತ್ಮೀಕ ಗುಣವಾಗಿದೆ. ಈ ಅಸ್ಪಷ್ಟ ಮೋಡದಂತೆÉ ಮೊಬ್ಬಾಗಿರುವ ಆದರೆ ಪ್ರಮುಖ್ಯವಾದ ಆತ್ಮೀಕ ಗುಣದ ಕುರಿತು ಬರೆಯುವ ಧೈರ್ಯವನ್ನು ಮಾಡಿದವರು ಕೆಲವೇ ಕೆಲವರಿದ್ದಾರೆ. ಈ ರೋಮಾಂಚನಕಾರಿ ಸಂಪುಟದಲ್ಲಿ, ಡ್ಯಾಗ್ ಹೇವರ್ಡ್-ಮಿಲ್ಸ್ನು ಗರ್ವದ ಅನೇಕ ಕುಟಿಲವಾದ ರೂಪಗಳನ್ನು ಬಯಲಿಗೆ ತರುತ್ತಾನೆ. ಈ ಶಕ್ತಿಶಾಲಿ ಪುಸ್ತಕವು ಹೋರಾಟದಲ್ಲಿರುವ ಜೊತೆಯ ಕ್ರೈಸ್ತನಿಂದ ಬರೆಯಲ್ಪಟ್ಟಿದ್ದು, ನಿಮಗೆ ಆಶೀರ್ವಾದ ತರುವದು ಹಾಗೂ ಯೇಸು ಕ್ರಿಸ್ತನ ಮಗುವಿನಂಥ ದೀನತೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ನಿಮಗೆ ಪೋತ್ಸಾಹವನ್ನು ನೀಡುವದು.
-
ನಮಗೆ ಪ್ರಕಟವಾದ ಈ ಮಹಾ ರಕ್ಷಣೆಯ ಕುರಿತು ಹೆಚ್ಚಾಗಿ ತಿಳಿದುಕೊಳ್ಳಲು ಪೂರ್ವದ ಪ್ರವಾದಿಗಳು ವಿಚಾರಿಸಿದರೂ ಮತ್ತು ಪರಿಶೋಧಿಸಿದರೂ ಎಂಬುದು ನಿಮಗೆ ತಿಳಿದಿದೆಯೇ? ಈ ರಕ್ಷಣೆಯು ಮನುಷ್ಯರಿಗೆ ಹೇಗೆ ಉಂಟಾಗುತ್ತದೆಂದು ಅವರಿಗೆ ಊಹಿಸಲು ಆಗಲಿಲ್ಲ…ಆದರೆ ಈ ರಕ್ಷಣೆಯನ್ನು ನಾವು ಹೊಂದಿಕೊಳ್ಳುವುದಕ್ಕೆ ಆಶೀರ್ವದಿಸಲ್ಪಟ್ಟರಾಗಿದ್ದೇವೆ! ಯಾರೊಬ್ಬರು ನಮಗೆ ಹೇಳಿದರ ನಿಮಿತ್ತ ನಾವು ರಕ್ಷಣೆಯನ್ನು ಹೊಂದಿಕೊಂಡೆವು. ಆತ್ಯಾಕರ್ಷಕವಾದ ಈ ಪುಸ್ತಕದಲ್ಲಿ, ಸುವಾರ್ತಿಕ ಡಗ್ ಹೆವಾರ್ಡ್-ಮಿಲ್ಸ್ ರವರು ನಮ್ಮ ಮಹಾ ರಕ್ಷಣೆಯ ಅರ್ಥಮಾಡಿಕೊಳ್ಳುವುದಕ್ಕೆ ಮಾತ್ರವಲ್ಲ ಆದರೆ ಈ ಮಹಾ ರಕ್ಷಣೆಯ ಕುರಿತು ಇತರರೊಂದಿಗೆ ಹೇಗೆ ಹಂಚಿಕೊಳ್ಳಬೇಕು ಎಂದು ನಮಗೆ ಬೋಧಿಸುತ್ತಾರೆ. ನಾವು ಪ್ರತಿಯೊಬ್ಬರು ಸುವಾರ್ತಿಕನ ಸೇವೆಯನ್ನು ಮಾಡೋಣ!
-
ನಿಜವಾಗಿಯೂ ದೇವರು ಅನೇಕ ಜನರನ್ನು ಕರೆದಿದ್ದಾನೆ. ಭೂಮಿಯ ಮೇಲಿನ ನಮ್ಮ ಜೀವೀತವು ಆತನಿಗೆ ಸೇವೆ ಸಲ್ಲಿಸಲು ಒಂದು ಅವಕಾಶವಾಗಿದೆ, ಮತ್ತು ನೀವು ದೇವರ ರಾಜ್ಯಕ್ಕಾಗಿ ಮಾಡುತ್ತಿರುವ ಕೆಲಸಗಳ ಮೇಲೆ ಆತನ ಕಣ್ಣು ಹೊಂದಿರುವನು. ಈ ಪುಸ್ತಕವು ಉತ್ಸಾಹದಿಂದ ಓದುವಂತೆ ಮಾಡುತ್ತದೆ. ಲೇಖಕನು ಹೇಳಿದ ಸತ್ಯಗಳನ್ನು ನೀವು ಅಂತರ್ಗತ ಮಾಡಿಕೊಂಡರೆ, ನಿಮ್ಮ ಜೀವನದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲು ಬುದ್ದಿವಂತಿಕೆಯನ್ನು ಹೋಂದುವಿರಿ.
-
ಜೀವಿತವು ಎಲ್ಲರಿಗೂ ಸವಾಲಿನದ್ದಾಗಿರುತ್ತದೆ. ಅನೇಕ ಸಮಯದಲ್ಲಿ ಜಯಿಸಲು ನಿಮಗೆ ಯಾವುದು ಅವಶ್ಯಕವಾಗಿರುತ್ತದೆಯೋ ಅದನ್ನೇ ಆತನಜ್ಞಾನದ ಮೂಲಕ ಒದಗಿಸಲಾಗುತ್ತದೆ. ಜ್ಞಾನವು ದೇವರ ರಹಸ್ಯವಾಗಿದ್ದು ನೀವು ನಿಮ್ಮ ಜೀವಿತದಲ್ಲಿ ಎದುರಾಗುವ ಕಷ್ಟಗಳನ್ನು ಜಯಿಸಿ ಅದ್ಭುತವಾಗಿಜೀವಿಸಲು ಸಹಾಯ ಮಾಡುತ್ತದೆ. ದೇವರು ನಿಮ್ಮನ್ನು ಮಹಿಮೆಗಾಗಿ ಪ್ರತಿಷ್ಠಿಸಿದ್ದಾನೆ. ದೇವರ ರಹಸ್ಯವೇ ದೇವರ ಜ್ಞಾನವಿದ್ದು ನಿಮ್ಮ ಪ್ರಭಾವ ಹಾಗೂಘನತೆಗಾಗಿ ಪ್ರತಿಷ್ಟಿಸಲಾಗಿದೆ. ಈ ಪುಸ್ತಕದ ಪ್ರಕಟನೆಗಳು ನಿಮಗೆ ಪ್ರತಿದಿನ ಜಯವನ್ನು ತರಲಿ! ಈ ಪುಸ್ತಕವು ಜಯವನ್ನು ಪಡೆಯಲು ನಿಮಗೆಜ್ಞಾನವನ್ನು ಕೊಡಲಿ.
-
ಡ್ಯಾಗ್ ಹೇವರ್ಡ್-ಮಿಲ್ಸ್ ಉತ್ತಮ ಮಾರಾಟವಾಗುವ “ವಿಶ್ವಾಸನಿಷ್ಠೆ ಮತ್ತು ವಿಶ್ವಾಸನಿಷ್ಠೆರಹಿತತೆ” ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿರುತ್ತಾರೆ. ಈತನು ಎರಡು ಸಾವಿರಕ್ಕೂ ಅಧಿಕ ಸಭೆಗಳನ್ನು ಒಳಗೊಂಡಿರುವ ಲೈಟ್ ಹೌಸ್ ಚಾಪೆಲ್ ಇಂಟರನ್ಯಾಷನಲ್ ಸಂಸ್ಥೆಯ ಸ್ಥಾಪಕನಾಗಿರುತ್ತಾರೆ. ಡ್ಯಾಗ್ ಹೇವರ್ಡ್-ಮಿಲ್ಸ್ ಅಂತರ್ ರಾಷ್ಟ್ರೀಯ ಸುವಾರ್ತಿಕರಾಗಿದ್ದು, ಹೀಲಿಂಗ್ ಜೀಸಸ್ ಕ್ರೂಸಡ್ ಹಾಗೂ ವಿಶ್ವದಲ್ಲೆಲ್ಲಾ ನಡೆಯುವ ಸಮಾವೇಶಗಳಲ್ಲಿ ಸೇವೆ ಮಾಡುತ್ತಾರೆ. ಹೆಚ್ಚಿನ ಮಾಹಿತಿಗೋಸ್ಕರ ಭೇಟಿ ಕೊಡಿ: