-
ಜೀವಿತವು ಎಲ್ಲರಿಗೂ ಸವಾಲಿನದ್ದಾಗಿರುತ್ತದೆ. ಅನೇಕ ಸಮಯದಲ್ಲಿ ಜಯಿಸಲು ನಿಮಗೆ ಯಾವುದು ಅವಶ್ಯಕವಾಗಿರುತ್ತದೆಯೋ ಅದನ್ನೇ ಆತನಜ್ಞಾನದ ಮೂಲಕ ಒದಗಿಸಲಾಗುತ್ತದೆ. ಜ್ಞಾನವು ದೇವರ ರಹಸ್ಯವಾಗಿದ್ದು ನೀವು ನಿಮ್ಮ ಜೀವಿತದಲ್ಲಿ ಎದುರಾಗುವ ಕಷ್ಟಗಳನ್ನು ಜಯಿಸಿ ಅದ್ಭುತವಾಗಿಜೀವಿಸಲು ಸಹಾಯ ಮಾಡುತ್ತದೆ. ದೇವರು ನಿಮ್ಮನ್ನು ಮಹಿಮೆಗಾಗಿ ಪ್ರತಿಷ್ಠಿಸಿದ್ದಾನೆ. ದೇವರ ರಹಸ್ಯವೇ ದೇವರ ಜ್ಞಾನವಿದ್ದು ನಿಮ್ಮ ಪ್ರಭಾವ ಹಾಗೂಘನತೆಗಾಗಿ ಪ್ರತಿಷ್ಟಿಸಲಾಗಿದೆ. ಈ ಪುಸ್ತಕದ ಪ್ರಕಟನೆಗಳು ನಿಮಗೆ ಪ್ರತಿದಿನ ಜಯವನ್ನು ತರಲಿ! ಈ ಪುಸ್ತಕವು ಜಯವನ್ನು ಪಡೆಯಲು ನಿಮಗೆಜ್ಞಾನವನ್ನು ಕೊಡಲಿ.
-
ಸೇವೆಗೆ ನೀಡಿರುವ ಕರೆಯು ನಾಯಕತ್ವಕ್ಕಾಗಿ ನೀಡಿದ ಕರೆಯಾಗಿದೆ. ಇನ್ನೊಂದು ಸಾರಿ, ಸರಳವಾದ ಹಾಗೂ ದೀನ ಮನೋಭಾವದಿಂದ ಡಾ. ಡ್ಯಾಗ್ ಹೇವರ್ಡ್-ಮಿಲ್ಸ್ ತನ್ನನ್ನು ಒಬ್ಬ ಗಮನಾರ್ಹ ಕ್ರೈಸ್ತೀಯ ನಾಯಕನನ್ನಾಗಿ ಮಾಡಿರುವ ತತ್ವಗಳನ್ನು ಸವಿಸ್ತಾರವಾಗಿ ವಿವರಿಸುತ್ತಾನೆ. ಇಲ್ಲಿ ಪ್ರಕಟಗೊಳಿಸಲಾಗಿರುವ ಸತ್ಯಗಳು ಅನೇಕರಲ್ಲಿ ನಾಯಕತ್ವದ ಕಲೆಯನ್ನು ರೂಢಿಸಿಕೊಳ್ಳಲು ಸ್ಪೂರ್ತಿಗೊಳಿಸುವವು.
-
“ಈ ಪುಸ್ತಕದ ಶೀರ್ಷಿಕೆ ತಕ್ಷಣವೇ ಸಣ್ಣ ಮಕ್ಕಳು ಸಂತೋಷದಿಂದ ಹಾಡುವ ಬಗ್ಗೆ ಯೋಚಿಸುವಂತೆ ಮಾಡುತ್ತದೆ...ನೀವು ಪ್ರತಿದಿನ ನಿಮ್ಮ ಸತ್ಯವೇದವನ್ನು ಓದುತ್ತೀರಾ? ನೀವು ಪ್ರತಿದಿನ ಪ್ರಾರ್ಥಿಸುತ್ತೀರಾ? ಈ ಪುಸ್ತಕವು ಸತ್ಯವೇದ ಎಂದು ಕರೆಯಲ್ಪಡುವ ಈ ಅದ್ಭುತವಾದ ಒಂದು ಪುಸ್ತಕಕ್ಕೆ ನಿಮ್ಮ ಕಣ್ಣುಗಳನ್ನು ತೆರೆಯುಂತೆ ಮಾಡುತ್ತದೆ. ನೀವು ಸತ್ಯವೇದವನ್ನು ಓದುವಾಗ ಮತ್ತುಪ್ರತಿದಿನ ಪ್ರಾರ್ಥಿಸುವಾಗ ಪ್ರತಿದಿನ ನಿಮಗೆ ಬರುವ ಅದ್ಬುತಗಳನ್ನು ಇದು ನಿಮಗೆ ತೊರಿಸುತ್ತದೆ. ನಿಮ್ಮ ದೈನಂದಿನ ಸತ್ಯವೇದ ಓದುವಿಕೆ ಮತ್ತು ದೈನಂದಿನ ಪ್ರಾರ್ಥನೆನಿಮಗೆ ಆನಂದವುಂಟುಮಾಡಲಿ!”
-
ಸೇವೆಯು ಕ್ಲೀಷ್ಠಕರವಾದದ್ದು! ಜೀವನವು ಕ್ಲೀಷ್ಠಕರವಾದದ್ದು! ನೋಡುವದಕ್ಕೆ ಸಾಧ್ಯವಿಲ್ಲದ ದೇವರನ್ನು ಹಿಂಬಾಲಿಸುವದು ಅಷ್ಟು ಸುಲಭವಲ್ಲ. ನೀವುಆಲಿಸಲಿಕ್ಕಾಗದ ದೇವರನ್ನು ಅನುಸರಿಸುವದು ಸುಲಭವಲ್ಲ. ನೀವು ಈ ಪುಸ್ತಕವನ್ನು ಓದಿದ್ದಾದರೆ, ದೇವರಿಗೆ ನೀವು ಮಾಡುವ ಸೇವೆಯ ಸುತ್ತ ಇರುವ ಮರ್ಮಗಳ ಹೊರತಾಗಿಯೂ ನೀವು ನಿಮ್ಮ ಸೇವೆಯನ್ನುನೆರವೇರಿಸುವದಕ್ಕೆ ಬೇಕಾದ ಅನೇಕ ಬೀಗದ ಕೈಗಳ ಕುರಿತು ಕಂಡುಕೊಂಡವರಾಗಿರುವಿರಿ. ಈ ಪುಸ್ತಕದಲ್ಲಿ ನಿಮಗೆ ಕರ್ತನಿಂದ ಬರುತ್ತಿರುವ ಸಕಲಮಾರ್ಗಸೂಚಿಗಳನ್ನು ನೀವು ಅನುಸರಿಸುವದು ಪ್ರಾಮುಖ್ಯವಾಗಿರುತ್ತದೆ. ಈ ಪುಸ್ತಕದಲ್ಲಿರುವ ಮರ್ಮಗಳು ನಿಮ್ಮನ್ನು ನಿಮ್ಮ ಸೇವೆಯನ್ನು ಲೋಪವಿಲ್ಲದೆನಡಿಸುವ ದಾರಿಯಲ್ಲಿ ನಡಿಸುತ್ತಿವೆ. ಒಂದು ದಿನ ನೀವು ಈ ಮಾತುಗಳನ್ನು ಹೇಳುವಿರಿ, “ನಾನು ನನ್ನ ಓಟವನ್ನು ಕಡೇಗಾಣಿಸಿದ್ದೇನೆ ಹಾಗೂ ನನ್ನ ಸೇವೆಯನ್ನು ನೆರವೇರಿಸಿದ್ದೇನೆ!” ನೀವುನಿಮ್ಮ ಸೇವೆಯನ್ನು ಲೋಪವಿಲ್ಲದೆ ನಡಿಸುವದಕ್ಕೆ ಕೃಪೆಯೂ ಶಕ್ತಿಯೂ ನಿಮಗೆ ದೊರಕಲಿ!
-
ದೀನತೆಯು ಒಂದು ಪ್ರಾಮುಖ್ಯವಾದ ಆತ್ಮೀಕ ಗುಣವಾಗಿದೆ. ಈ ಅಸ್ಪಷ್ಟ ಮೋಡದಂತೆÉ ಮೊಬ್ಬಾಗಿರುವ ಆದರೆ ಪ್ರಮುಖ್ಯವಾದ ಆತ್ಮೀಕ ಗುಣದ ಕುರಿತು ಬರೆಯುವ ಧೈರ್ಯವನ್ನು ಮಾಡಿದವರು ಕೆಲವೇ ಕೆಲವರಿದ್ದಾರೆ. ಈ ರೋಮಾಂಚನಕಾರಿ ಸಂಪುಟದಲ್ಲಿ, ಡ್ಯಾಗ್ ಹೇವರ್ಡ್-ಮಿಲ್ಸ್ನು ಗರ್ವದ ಅನೇಕ ಕುಟಿಲವಾದ ರೂಪಗಳನ್ನು ಬಯಲಿಗೆ ತರುತ್ತಾನೆ. ಈ ಶಕ್ತಿಶಾಲಿ ಪುಸ್ತಕವು ಹೋರಾಟದಲ್ಲಿರುವ ಜೊತೆಯ ಕ್ರೈಸ್ತನಿಂದ ಬರೆಯಲ್ಪಟ್ಟಿದ್ದು, ನಿಮಗೆ ಆಶೀರ್ವಾದ ತರುವದು ಹಾಗೂ ಯೇಸು ಕ್ರಿಸ್ತನ ಮಗುವಿನಂಥ ದೀನತೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ನಿಮಗೆ ಪೋತ್ಸಾಹವನ್ನು ನೀಡುವದು.