-
ಯೇಸು ಕ್ರಿಸ್ತನನ್ನು ನಿಮ್ಮ ಕರ್ತನು ಮತ್ತು ರಕ್ಷಕನನ್ನಾಗಿ ಸ್ವೀಕರಿಸಿದ ನಂತರ ನೀವು ರಕ್ಷಣೆ ಹೊಂದಿದ್ದೀರಿ! ನೀವು ಹೊಸದಾಗಿ ಹುಟ್ಟಿದ ಕ್ರೈಸ್ತರುಮತ್ತು ನಿಮ್ಮ ಹೆಸರು ಜೀವ ಭಾದ್ಯರ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ. ನಿಮ್ಮ ಪ್ರಶ್ನೆ: “ಮುಂದೆ ತೆಗೆದುಕೊಳ್ಳಬೇಕಾದ ಹೆಜ್ಜೆ ಯಾವುದು?” ಕ್ರೈಸ್ತರಾಗಿರುವದು ಉತ್ತಮವಾದ ಹೆಜ್ಜೆ, ಆದರೆ ಅದು ಪ್ರಾರಂಭ ಮಾತ್ರ. ನೀವು ಉತ್ತಮವಾದ, ಬಲವಾದ ಕ್ರೈಸ್ತರಾಗಬೇಕಾಗಿದೆ. ’ಹಾಗಿದ್ದಲ್ಲಿಅದನ್ನು ನಾನು ಹೇಗೆ ಮಾಡಬೇಕು?’ – ಮತ್ತು ಮರಣಕ್ಕೆ ಅಥವಾ ಎತ್ತಲ್ಪಡುವದಕ್ಕೆ ಸಿದ್ದರಾಗಿರುವ ಬಲವಾದ ಕ್ರೈಸ್ತರಾಗಲು ತೆಗೆದುಕೊಳ್ಳಬೇಕಾದ ಹಜ್ಜೆಗಳನ್ನು ಈ ಪುಸ್ತಕದಲ್ಲಿ, ನೀವು ಕಲಿಯುತ್ತೀರಿ
-
ನಿಜವಾಗಿಯೂ ದೇವರು ಅನೇಕ ಜನರನ್ನು ಕರೆದಿದ್ದಾನೆ. ಭೂಮಿಯ ಮೇಲಿನ ನಮ್ಮ ಜೀವೀತವು ಆತನಿಗೆ ಸೇವೆ ಸಲ್ಲಿಸಲು ಒಂದು ಅವಕಾಶವಾಗಿದೆ, ಮತ್ತು ನೀವು ದೇವರ ರಾಜ್ಯಕ್ಕಾಗಿ ಮಾಡುತ್ತಿರುವ ಕೆಲಸಗಳ ಮೇಲೆ ಆತನ ಕಣ್ಣು ಹೊಂದಿರುವನು. ಈ ಪುಸ್ತಕವು ಉತ್ಸಾಹದಿಂದ ಓದುವಂತೆ ಮಾಡುತ್ತದೆ. ಲೇಖಕನು ಹೇಳಿದ ಸತ್ಯಗಳನ್ನು ನೀವು ಅಂತರ್ಗತ ಮಾಡಿಕೊಂಡರೆ, ನಿಮ್ಮ ಜೀವನದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲು ಬುದ್ದಿವಂತಿಕೆಯನ್ನು ಹೋಂದುವಿರಿ.
-
“ಸತ್ಯವೇದದಲ್ಲಿನ ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರದ ಕಥೆಯು ನಮಗೆ ಹೇಗೆ ಸಂಬಂಧಿಸಿದೆ ಎಂದು ನಮ್ಮಲ್ಲಿ ಹಲವರಿಗೆ ಅರ್ಥವಾಗುತ್ತಿಲ್ಲ. ಇದುದುರದೃಷ್ಟಕರ ಘಟನೆ ಮತ್ತು ಆದಾಮ ಮತ್ತು ಹವ್ವಳ ಮೇಲೆ ಪರಿಣಾಮ ಬೀರಿತು ಮತ್ತು ಅದರಿಂದ ನಾವು ತಪ್ಪಿಸಿಕೊಂಡಿದ್ದೇವೆ ಎಂದು ನಾವು ಭಾವಿಸುತ್ತೇವೆ. ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರದಿಂದ ನೀವು ನಿಜವಾಗಿಯೂ ತಪ್ಪಿಸಿಕೊಂಡಿದ್ದೀರಾ? ಈ ನೇರ ಪುಸ್ತಕದಲ್ಲಿ, ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರವು ಇಂದಿಗೂ ಅಸ್ತಿತ್ವದಲ್ಲಿದೆ ಎಂದು ನೀವು ತಿಳಿಯುವಿರಿ. ಆದಾಮ ಮತ್ತು ಹವ್ವಳಿಗೆಮಾಡಿದಂತೆಯೇ ಅದೇ ಶೋಧನೆಯನ್ನು ಅದು ನಮಗೆ ನೀಡುತ್ತದೆ ಎಂದು ನೀವು ಕಂಡುಕೊಳ್ಳುವಿರಿ. ಈ ಪುಸ್ತಕದಲ್ಲಿ ನೀವು ಸಂಪಾದಿಸಿದ ಜ್ಞಾನವನ್ನುಬಳಸಿಕೊಂಡು ಜೀವನ ಮತ್ತು ಸೇವೆಯ ಮೂಲಕ ಮುಂದೆ ಹೊಗಲು ಸಹಾಯ ಮಾಡುವ ಸತ್ಯಗಳನ್ನು ಸಹ ನೀವು ಕಂಡುಕೊಳ್ಳುವಿರಿ.”
-
ನಮಗೆ ಪ್ರಕಟವಾದ ಈ ಮಹಾ ರಕ್ಷಣೆಯ ಕುರಿತು ಹೆಚ್ಚಾಗಿ ತಿಳಿದುಕೊಳ್ಳಲು ಪೂರ್ವದ ಪ್ರವಾದಿಗಳು ವಿಚಾರಿಸಿದರೂ ಮತ್ತು ಪರಿಶೋಧಿಸಿದರೂ ಎಂಬುದು ನಿಮಗೆ ತಿಳಿದಿದೆಯೇ? ಈ ರಕ್ಷಣೆಯು ಮನುಷ್ಯರಿಗೆ ಹೇಗೆ ಉಂಟಾಗುತ್ತದೆಂದು ಅವರಿಗೆ ಊಹಿಸಲು ಆಗಲಿಲ್ಲ…ಆದರೆ ಈ ರಕ್ಷಣೆಯನ್ನು ನಾವು ಹೊಂದಿಕೊಳ್ಳುವುದಕ್ಕೆ ಆಶೀರ್ವದಿಸಲ್ಪಟ್ಟರಾಗಿದ್ದೇವೆ! ಯಾರೊಬ್ಬರು ನಮಗೆ ಹೇಳಿದರ ನಿಮಿತ್ತ ನಾವು ರಕ್ಷಣೆಯನ್ನು ಹೊಂದಿಕೊಂಡೆವು. ಆತ್ಯಾಕರ್ಷಕವಾದ ಈ ಪುಸ್ತಕದಲ್ಲಿ, ಸುವಾರ್ತಿಕ ಡಗ್ ಹೆವಾರ್ಡ್-ಮಿಲ್ಸ್ ರವರು ನಮ್ಮ ಮಹಾ ರಕ್ಷಣೆಯ ಅರ್ಥಮಾಡಿಕೊಳ್ಳುವುದಕ್ಕೆ ಮಾತ್ರವಲ್ಲ ಆದರೆ ಈ ಮಹಾ ರಕ್ಷಣೆಯ ಕುರಿತು ಇತರರೊಂದಿಗೆ ಹೇಗೆ ಹಂಚಿಕೊಳ್ಳಬೇಕು ಎಂದು ನಮಗೆ ಬೋಧಿಸುತ್ತಾರೆ. ನಾವು ಪ್ರತಿಯೊಬ್ಬರು ಸುವಾರ್ತಿಕನ ಸೇವೆಯನ್ನು ಮಾಡೋಣ!
-
ಗ್ರೀಕ್ ಪದವಾದ ಲಾಯಕೋಸ್ ಎಂಬುದರ ಅರ್ಥವು “ಯಾವದೇ ಕುಶಲತೆಗಳಿಲ್ಲದಿರುವದು” ಎಂಬುದೇ. “ಕುಶಲತೆಗಳ ಕೊರತೆಯಿದ್ದ” ಜನರಿಂದ ಮಹಾನ್ ಕಾರ್ಯಗಳು ಸಾಧಿಸಲ್ಪಟ್ಟಿವೆ ಎಂಬುದನ್ನು ಇತಿಹಾಸವು ನಮಗೆ ಕಲಿಸಿರುತ್ತದೆ. ಡ್ಯಾಗ್ ಹೇವರ್ಡ್-ಮಿಲ್ಸ್ರ ಈ ಅತ್ಯದ್ಭುತವಾದ ಪುಸ್ತಕದ ಮೂಲಕವಾಗಿ, ಸಭೆಯಲ್ಲಿ ಕೆಲಸ ಮಾಡುವದಕ್ಕೆ ಶ್ರೀಸಾಮಾನ್ಯ ಸೇವಕರಿಲ್ಲದಿದ್ದರೆ ಏನಾಗುತ್ತದೆ; ಶ್ರೀಸಾಮಾನ್ಯ ಸೇವಕರೊಂದಿಗೆ ಹೇಗೆ ಭಾರವನ್ನು ಹಂಚಿಕೆ ಮಾಡಿಕೊಳ್ಳತಕ್ಕದ್ದು ಮತ್ತು ಶ್ರೀಸಾಮಾನ್ಯ ಸೇವೆಯನ್ನು ಕಾಪಾಡುವದಕ್ಕೆ ಹೇಗೆ ಹೋರಾಟ ಮಾಡಬೇಕು ಎಂಬುದನ್ನು ಕಲಿತುಕೊಳ್ಳಿರಿ.
-
ಡ್ಯಾಗ್ ಹೇವರ್ಡ್-ಮಿಲ್ಸ್ ಉತ್ತಮ ಮಾರಾಟವಾಗುವ “ವಿಶ್ವಾಸನಿಷ್ಠೆ ಮತ್ತು ವಿಶ್ವಾಸನಿಷ್ಠೆರಹಿತತೆ” ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿರುತ್ತಾರೆ. ಈತನು ಎರಡು ಸಾವಿರಕ್ಕೂ ಅಧಿಕ ಸಭೆಗಳನ್ನು ಒಳಗೊಂಡಿರುವ ಲೈಟ್ ಹೌಸ್ ಚಾಪೆಲ್ ಇಂಟರನ್ಯಾಷನಲ್ ಸಂಸ್ಥೆಯ ಸ್ಥಾಪಕನಾಗಿರುತ್ತಾರೆ. ಡ್ಯಾಗ್ ಹೇವರ್ಡ್-ಮಿಲ್ಸ್ ಅಂತರ್ ರಾಷ್ಟ್ರೀಯ ಸುವಾರ್ತಿಕರಾಗಿದ್ದು, ಹೀಲಿಂಗ್ ಜೀಸಸ್ ಕ್ರೂಸಡ್ ಹಾಗೂ ವಿಶ್ವದಲ್ಲೆಲ್ಲಾ ನಡೆಯುವ ಸಮಾವೇಶಗಳಲ್ಲಿ ಸೇವೆ ಮಾಡುತ್ತಾರೆ. ಹೆಚ್ಚಿನ ಮಾಹಿತಿಗೋಸ್ಕರ ಭೇಟಿ ಕೊಡಿ: